ಗ್ಲೋರಿಯಸ್ ಅಂಜೆಲರ್ ಲಾಂಛನದಡಿಯಲ್ಲಿ ವಿಶ್ವನಾಥ್ ಕೋಡಿಕಲ್ ನಿರ್ದೇಶನದಲ್ಲಿ 'ಎನ್ನ' ತುಳು ಚಲನ ಚಿತ್ರ ಜ್ಯೋತಿ ಚಿತ್ರ ಮಂದಿರದಲ್ಲಿ ಶುಕ್ರವಾರ ಬಿಡುಗಡೆಗೊಂಡಿತು. ,ಎನ್ನ 'ಚಿತ್ರ' ದ ನಿರ್ಮಾಪಕರಾದ ಕ್ಯೆನುಟ್ ಮಾಥಾಯಿಸ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಚಲನ ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ,ಹಿರಿಯ ಪತಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ,ಎನ್ನ ಚಲನ ಚಿತ್ರದ ಸಹ ನಿರ್ಮಾಪಕ ಮ್ಯಾಕ್ಸಿಮ್ ಪಿರೇರಾ ಮತ್ತು ನಿಶಾ ಪಿರೇರಾ, ಚಲನ ಚಿತ್ರ ನಿರ್ಮಾಪಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಪ್ರೊಡಕ್ಷನ್ ಮೆನೇಜರ್ ರಾಜೇಶ್ ಕುಡ್ಲ, ಸಂಗೀತ ನಿರ್ದೇಶಕ ಲೋಯ್ ವೆಲೆಂಟೈನ್ ಸಲ್ದಾನಾ, ನಾಯಕ ನಟ ವಿ.ಜೆ ವಿನೀತ್, ನಾಯಕಿ ನಟಿ ಶೃತಿ ಪೂಜಾರಿ, ಪ್ರಶಾಂತ್ ಸಿ.ಕೆ, ಅಶ್ಮಿತ್ ರಾಜ್, ವೈಶಾಲಿ .ಎಸ್.ಉಡುಪಿ, ಯುವ ವಕೀಲ ಅಸ್ಗರ್ ಮುಡಿಪು, ಮೊದಲಾದವರು ಉಪಸ್ಥಿತರಿದ್ದರು.
ಭವ್ಯಶ್ರೀ ಕುಡುಪು ಕಾರ್ಯಕ್ರಮ ನಿರೂಪಿಸಿದರು.
Comments powered by CComment